Legend

ಕ್ಷೇತ್ರದ ಇತಿಹಾಸ ಹಿನ್ನಲೆ

ತೋಡಾರಿನ ಶ್ರೀ ಕ್ಷೇತ್ರ  ಕೊಡಮಣಿತ್ತಾಯನ ಇತಿಹಾಸವೇ ಕೌತುಕವಾದದ್ದು  ಸಂಪತ್ಬರಿತವಾದ  ತುಳುನಾಡಿನಲ್ಲಿ ಜೈನರ ಪ್ರಭಾವ ಹೇರಳವಾಗಿತ್ತು. ತುಳುನಾಡಿನ ದೈವರಾಧನೆಯನ್ನು ಜೊತೆಗೊಡಿಸಿಕೊಂಡು ಅಡಳಿತವನ್ನು ಜೈನರು ನಡೆಸುತ್ತಿದ್ದರು. ಹೀಗೆ ಅಂದಾಜು ಸುಮಾರು 800 ವರ್ಷಗಳ  ಹಿಂದೆ ಕಾರ್ಕಳ ಸಮೀಪದ ಬಲಿಪಗುತ್ತು ಎಂಬ ಜೈನ ಕೂಡು ಕುಟುಂಬದ ದೇವು ಬಲಿಪ ಎನ್ನುವ ವ್ಯಕ್ತಿಯು ತನ್ನವರ ಜೊತೆಗಿನ ಅಸಮಧಾನದಿಂದಾಗಿ ಊರು ತೊರೆಯುತ್ತಾರೆ. ಈ ಸಂದರ್ಭದಲ್ಲಿ  ಬಲಿಪಗುತ್ತುವಿನಲ್ಲಿ ದೈವದ ಕೆಲಸ ಕಾರ್ಯಗಳನ್ನು ನೆರವೇರಿಸುತಿದ್ದ ಉಗ್ಗ ಅಡಪ ಎನ್ನುವ ವ್ಯಕ್ತಿಯೂ ಇವರ ಜೊತೆಗೆ ನಡೆಯುತ್ತಾನೆ. ಹೀಗೆ ಊರು ಬಿಟ್ಟು ಹೊರಡುವ ಸಮಯದಲ್ಲಿ ದಾರಿಯಲ್ಲಿ ದಣಿವಾರಿಸಿಕೊಳ್ಳುವುದಕ್ಕಾಗಿ ಎರಡು ಸೀಯಾಳವನ್ನು ಹಿಡಿದುಕೊಂಡು ಬರುತ್ತಾರೆ. ಹೀಗೆ ದಕ್ಷಿಣಾಭಿಮುಖವಾಗಿ ತಮ್ಮ ಪ್ರಯಾಣವನ್ನು ಬೆಳೆಸಿ ಜೈನಕಾಶಿ ಎಂದೇ ಹೆಸರುವಾಸಿಯಾಗಿದ್ದ ಮೂಡಬಿದಿರೆಯ ಸಮೀಪದ ಈಗಿನ ತೋಡಾರಿನ  ಬಳಿಯಲ್ಲಿರುವ ನೇರಳಕಟ್ಟೆ ಎನ್ನುವ ಕಾಡು ಪ್ರದೇಶವನ್ನು ತಲುಪುವಾಗ ಹೊತ್ತು ಸಂಜೆಯಾಗಿತ್ತು. ಮುಂದೆ ನೋಡಿದಾಗ ದಟ್ಟವಾದ ಕಾಡು ಮತ್ತು ಚೀರಿಮುಳ್ಳಿನ ಪೊದೆಯಿಂದ ಕೂಡಿದ್ದ ಕೈ ಪತ್ತಿ ಬಾಕ್ಯಾರು (ಬಾಕಿಮಾರು) ಎನ್ನುವ ಪ್ರದೇಶ ಕಾಣುತ್ತದೆ.

ಮುಂದೆ ನಮ್ಮ ಪ್ರಯಾಣ ಸಾಧ್ಯವಿಲ್ಲ ಎಂದೆನಿಸಿ ಅಲ್ಲಿಯೇ ಇರಲು ತೀರ್ಮಾನಿಸುತ್ತಾರೆ. ಹೀಗೆ ದೇವು ಬಲಿಪರು ಮತ್ತು ಉಗ್ಗ ಅಡಪರು ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡು ತಾವು ಮೊದಲೆ ತಂದ ಎಳೆನೀರನ್ನು ಕುಡಿಯುದಕ್ಕೆ ಅಣಿಯಾದಾಗ ಉಗ್ಗ ಅಡಪನ ಮೇಲೆ ಕೊಡಮಣಿತ್ತಾಯ ದೈವದ  ಅವೇಶವಾಗುತ್ತದೆ, ಇದನ್ನು ಕಂಡು ಭಯಗೊಂಡ ದೇವು ಬಲಿಪನು ಓಡಲು ಸಿದ್ದವಾದಾಗ ದೇವು ಬಲಿಪ ಹಿಂತುರುಗಿ ನೋಡು” ಎಂಬುವುದಾಗಿ ಆದೇಶಿಸಿ, ತನ್ನ ಕಾರ್ಣಿಕವನ್ನು ಮೆರೆಸಿ ಹಿಂದೆ ಇದ್ದ ಚೀರಿಮುಳ್ಳಿನ ಪೊದೆಯಲ್ಲಿ ಬೆಂಕಿಯನ್ನು ಕಾಣಿಸುತ್ತಾನೆ. ಹಗಲು ಜೀಟಿಗೆ (ಪಗೆಲ್ ಜೀಟಿಗೆ), ಹಗಲು ಸತ್ತಿಗೆ (ಪಗೆಲ್ ಸತ್ತಿಗೆ) ಜೋಡಿ ಸೀಯಾಳವನ್ನು ಕಾಣಿಸಿ ಗಾಳಿ ಗುಡ್ಡೆ ಎಂಬ ಪ್ರದೇಶದಲ್ಲಿ ಬೆಳಕಿನ ಪ್ರತಿರೂಪವಾಗಿ ಕಾಣುತ್ತಾನೆ.

ನಂತರ ಉಗ್ಗಡಪನ ಮುಖಾಂತರವಾಗಿ ನುಡಿಯಾಗಿ ನಾನು ಬಲಿಪಗುತ್ತುವಿನಿಂದ ನಿನ್ನ ಜೊತೆಗೆ ಬಂದಿರುವುದಾಗಿ ತಿಳಿಸಿ ಮುಂದೆ ಈ ಹೆಸರಿಲ್ಲದ ಊರಿನಲ್ಲಿ ನಾನು ಬೆಳಕಾಗಿ ಕಂಡ (ತುಡರಾಗಿ ಕಂಡ) ಈ ಊರು ತೋಡಾರು” ಎಂದು ಕರೆಯುವಂತೆ ಸೂಚಿಸುತ್ತಾನೆ. ಹೀಗೆ ನಡೆದ ವಿಚಾರವನ್ನು ಊರವರ ಜೊತೆ ತಿಳಿಸಿದ ದೇವು ಬಲಿಪರು ತೋಡಾರಿನಲ್ಲಿ ಚಾವಡಿಯನ್ನು ನಿರ್ಮಿಸುತ್ತಾರೆ ಇದು ಮುಂದೆ ತೋಡಾರು ಗುತ್ತು ಎಂದು ಕರೆಯಲ್ಪಡುತ್ತದೆ. ಕೊಡಮಣಿತ್ತಾಯನು ತುಡಾರಾಗಿ ಕಂಡಂತಹ ಗಾಳಿ ಗುಡ್ಡೆಯಲ್ಲಿ ಶ್ರೀ ದೈವವನ್ನು ಆರಾಧಿಸಿಕೊಂಡು ಬರುತ್ತಾರೆ. ನಂತರ ದೈವಕ್ಕೊಂದು ಭವ್ಯವಾದ ಸ್ಥಾನ ನಿರ್ಮಾಣವಾಗಬೇಕು ಎಂದು ತೀರ್ಮಾಣಿಸಿ ಮರಕಡ  ಆಳ್ವರ ಗೇಣಿಯಲ್ಲಿದ್ದ ನಡ್ಯೋಡಿ ಎಂಬಲ್ಲಿ ಸ್ಥಾನವನ್ನು ನಿರ್ಮಿಸುತ್ತಾರೆ.

ಆಡಂಬರಆಹಂಕಾರವನ್ನು ಸಹಿಸದ ಕೊಡಮಣಿತ್ತಾಯನುನಾಲೆರು ಕಟ್ಟಡಾ, ರಡ್ಡೆರು ತಪ್ಪಡಾ‘ (ನಾಲ್ಕು  ಕೋಣಗಳನ್ನು ಕಟ್ಟಬೇಡ ಎರಡು ಕೋಣಗಳನ್ನು ತಪ್ಪಬೇಡ), “ಉರ್ಕ್ಕಿನಾಯನ್ ಸಿರ್ಕಾವೆ”  ಎನ್ನುವ ನುಡಿಯಲ್ಲಿಯೇ  ಭಕ್ತರಿಗೆ ತನ್ನ ಸಿದ್ದಾಂತವನ್ನು ಪ್ರತಿಪಾದಿಸಿದ್ದಾನೆ.  ಹೀಗೆ ದೇವರಿಲ್ಲದ ಊರಿನಲ್ಲಿ ದೇವರು ನಾನೇ ದೈವವು ನಾನೆ ಎಂಬ ಪ್ರಧಾನ ನುಡಿಯಲ್ಲಿ ತೋಡಾರು ನೂರ್ದಾಲ ಪಟ್ಟದಲ್ಲಿ ನೆಲೆಯಾಗಿ ನೇರಳಕಟ್ಟೆಯಿಂದ  ಕಲ್ಸಂಕತನಕ  ತನ್ನ ರಾಜ್ಯ ಎಂಬುದಾಗಿ ತೀರ್ಮಾಣಿಸಿ ವಿಷವೈದ್ಯ ಕೊಡಮಣಿತ್ತಾಯನು ತನ್ನ ಸಾನಿಧ್ಯದಲ್ಲಿ ದೈವ ಹಾಗೂ ಬ್ರಹ್ಮ ಬೈದರ್ಕಳ  ಜೊತೆಗ ವೈಭವದಿಂದ ಆರಾಧಿಸಲ್ಪಡುತ್ತಿದ್ದಾನೆ.

Legend

The history of Thodaru Shri Kshetra Kodamanithaya is an extremely curious legend.

The prosperous land of Tulunadu was dominantly inhabited by the Jain community in history, who administered the land alongside upholding the rituals such as Bhootaradhane. A historic document notes that one of the days in times like this, a joint Jain family in Karkala split up owing to internal reasons, and Devu Balipa from the Balipaguttu household chose renunciation of his family identity. When that happened, a person named Ugga Adupa, who took care of Bhootaradhane rituals in that household, also accompanied Devu Balipa.

As they strode across a few villages having left home, they plucked a few tender coconuts in order to quench their thirsts under the scorching sun. They walked towards Moodubidre, the town that is today popularly recognised as Jaina Kashi (pilgrimage for Jains). By evening that day, they happened to reach Neralakatte located close to current-day Thodar. What they encountered on reaching the place was nothing but deep forests consisting thorny bushes, recognised as Baakimaaru. They decided that they could not move, and rested for the day.

Legend says that when they were just about to consume the tender coconuts that they had brought along, the spirit of Kodamanithaya embodies Ugga Adupa. Shaken by the sudden outburst of his partner, Devu Balipa tries to escape the spot; which the spirit does not let happen by setting up the thorny bushes on fire. The spirit presents itself as a symbol of light over a place called Gaali Gudde – with pagel jeetige, (natively and religiously recognised form of a fire torch), pagel suttige (natively and religiously recognised form of a weapon) and a pair of tender coconuts. Later, the spirit speaks through Ugga Adupa, stating that it had accompanied Devu Balipa from Balipaguttu itself, and it must be now established at Thodar – the place that it saw as a symbol of light.

Devu Balipa narrates the event to the villagers the next day and eventually constructs the Thodaru Guttu at the same place. The place that Kodamanithaya had recognised as the symbol of light, Gaali Gudde, became the spot for the consecration of the spirit, which is worshipped till date. It was later decided that the spirit must be acknowledged with a right spot for worship, which was constructed at Nadyodi, a space owned by Marakada Jains. Through this legend, Kodamanithaya till date is the ruling deity of a village that knew neither God nor the spirit. Kodamanithaya is the all consuming and all giving force of the area.