ತುಡರಾಯನ ಪಂಥೊಲು 2022 ರ ಕರೆಯೋಲೆ

Uncategorized

ತುಡರಾಯನ ಪಂಥೊಲು 2022 ರ ಕರೆಯೋಲೆ

ಆತ್ಮೀಯರೇ,

ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿರುವ  ನಮ್ಮ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ-ಬೆಳೆಸುವ ಮತ್ತು ಊರ – ಪರವೂರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮಹೋನ್ನತ  ಆಶಯದೊಂದಿಗೆ ಶ್ರೀ ಕ್ಷೇತ್ರದ ವತಿಯಿಂದ ತುಡರಾಯನ ಪಂಥೊಲು ಎಂಬ ಕಾರ್ಯಕ್ರಮದಡಿ ಧಾರ್ಮಿಕತೆಯ ಅರಿವನ್ನು ಪಸರಿಸುವ ಚಟುವಟಿಕೆಗಳನ್ನು ಸ್ಪರ್ಧೆಯ ರೂಪದಲ್ಲಿ ಆಯೋಜಿಸಲು ತೀರ್ಮಾನಿಸಿರುತ್ತೇವೆ. ನಮ್ಮೆಲ್ಲ ಬಾಂಧವರು ಈ ಎಲ್ಲಾ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ , ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಅಪೇಕ್ಷಿಸುವ  . 

ತೋಡಾರ್‌ಗುತ್ತು ವಿಶಾಲ ಕೀರ್ತಿ ಬಲಿಪ, ಧರ್ಮದರ್ಶಿ, ಅನುವಂಶಿಕ ಆಡಳಿತದಾರರು

ಮಾರೂರು ಖಂಡಿಗ ಶ್ರೀ ರಾಮದಾಸ ಆಸ್ರಣ್ಣ, ಪ್ರಧಾನ ಪುರೋಹಿತರು

ಮೊಕ್ತೇಸರರು
ಮುಂಬೈ ಸೇವಾ ಸಮಿತಿ
ತೋಡಾರು ಗ್ರಾಮಸ್ಥರು

ತೋಡಾರ್ ಜಾತ್ರಾ ಪ್ರಯುಕ್ತ ಸಾಂಸ್ಕೃತಿಕ ಸ್ಫರ್ಧಾಕೂಟ

ದಿನಾಂಕ:ಡಿಸೆಂಬರ್ 04, 2022 ಆದಿತ್ಯವಾರ

ಸಮಯ: ಬೆಳಿಗ್ಗೆ ಘಂಟೆ 09 ರಿಂದ ಸಂಜೆ ಘಂಟೆ 05 ರ ವರೆಗೆ

ಸ್ಥಳ: ಶ್ರೀ ಕ್ಷೇತ್ರ ತೋಡಾರು

ಸ್ಪರ್ಧೆಯ ಹೆಸರು ವಿಭಾಗ
ಭಕ್ತಿಗೀತೆ ಕಿರಿಯ/ಹಿರಿಯ
ಭಜನೆ ಗ್ರೂಪ್ (ವಯಸ್ಸಿನ ಮಿತಿಯಿಲ್ಲ)
ಚಿತ್ರಕಲೆ ಕಿರಿಯ/ಹಿರಿಯ
ರಂಗೋಲಿ ಕಿರಿಯ/ಹಿರಿಯ
ಆಶು ಭಾಷಣ ಕಿರಿಯ
ರಸ ಪ್ರಶ್ನೆ ಕಿರಿಯ/ಹಿರಿಯ
ಹೂ ಕಟ್ಟುವುದು ಮಹಿಳೆಯರಿಗೆ
ಶಂಖ ಊದುವುದು ಕಿರಿಯ
ಜ್ಞಾಪಕ ಶಕ್ತಿ ಮತ್ತು ದೇವರ ನಾಮ ಕಿರಿಯ
   

ಪ್ರತಿ ತಂಡದಿಂದ ಆಯಾ ವಿಭಾಗದ ಷರತ್ತಿಗೆ ಅನುಗುಣವಾಗಿ ಸ್ಪರ್ಧಿಗಳ ಪಾಲ್ಗೊಳ್ಳುವಿಕೆಗೆ ಯಾವುದೇ ಸಂಖ್ಯಾ ಮಿತಿ ಇರುವುದಿಲ್ಲ

ತಂಡಗಳಾಗಿ ಇಲ್ಲವೇ ವಯಕ್ತಿಕ ನೆಲೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ನವೆಂಬರ್ 30,2022 ರ ಒಳಗಾಗಿ ಕೆಳಗೆ ಕೊಡಲಾಗುವ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವುದು

ಆಯಾ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಯಾದವರಿಗೆ ಸ್ಮರಣಿಕೆ ಮತ್ತು ನಗದು ಬಹುಮಾನ ಪುರಸ್ಕಾರವಾಗಿ ನೀಡಲಾಗುವುದು

ಎಲ್ಲಾ ಸ್ಪರ್ಧೆಗಳಲ್ಲಿ ಆಯಾ ತಂಡದ ವಿಜೇತ ಸದಸ್ಯರು ಗಳಿಸುವ ಒಟ್ಟು ಅಂಕಗಳ ಆಧಾರದಲ್ಲಿ ಆಕರ್ಷಕ ನಗದು ಪುರಸ್ಕಾರವನ್ನು ಒಳಗೊಂಡ ‘ಸಮಗ್ರ ತಂಡ’ ಪ್ರಶಸ್ತಿಯನ್ನು ಕೂಡ ಕೊಡಮಾಡಲಾಗುವುದು. ವಯಕ್ತಿಕ ನೆಲೆಯಲ್ಲಿ ಸ್ಪರ್ಧಿಸುವ ಸ್ಪರ್ಧಿಗಳನ್ನು ‘ತಂಡ ಪ್ರಶಸ್ತಿ’ಗೆ ಪರಿಗಣಿಸಲಾಗುವುದಿಲ್ಲ

ಕಿರಿಯರ ವಿಭಾಗದ ಸ್ಪರ್ಧಿಗಳು Age Proof ಒದಗಿಸುವುದು ಕಡ್ಡಾಯ

ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಚರ್ಚೆಗೆ ಆಸ್ಪದವಿರುವುದಿಲ್ಲ

ಭಕ್ತಿಗೀತೆ , ಭಜನೆಗಳ ವೀಡಿಯೋ ಕಳುಹಿಸಬೇಕಾದ ಸಂಖ್ಯೆ : +91 9110270949

For Enquiries & Registrations: +91 9945912997, +91 8088469491