ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ.
ಕ್ಷೇತ್ರ ಪರಿಚಯ
ಮೂಡಣದಿ ಬಾನೆತ್ತರಕೆ ಬೆಳೆದು ನಿಂತ ಹಚ್ಚ ಹಸುರು ಪಶ್ವಿಮಘಟ್ಟಗಳು, ಪಡುವಣದಿ ಭೊರ್ಗರೆದು ನೊರೆಹಾಲ ತೆರದಿ ಉಕ್ಕುತಿರುವ ಕಡಲು. ತುಳುನಾಡಿನ ವರ್ಣಣೆಯೆ ಹೀಗೆ . ಕಣ್ಣಳತೆಗೆ ಸಿಗದ ಕಡಲ ಕಿನಾರೆಯಿಂದ ಪೂರ್ವದ ಪಶ್ಚಿಮ ಘಟ್ಟಗಳವರೆಗೆ , ಬಡಗು ತುಳುನಾಡ ರಾಜಧಾನಿ ಬಾರ್ಕೂರಿನ ಸಮೀಪದ ಚಂದ್ರಗಿರಿ ನದಿಯಿಂದ ತೆಂಕಣದ ಕಾಸರಗೋಡು ನಿಲೇಶ್ವರದ ವರೆಗೆ ತುಳುನಾಡಿನ ವಿಸ್ತಾರ ಎನ್ನುವುದು ಇತಿಹಾಸದ ಪುಟಗಳನ್ನು ನಾವು ತಿರುವಿದಾಗ ನಮಗೆ ತಿಳಿಯುತ್ತದೆ. ಹೀಗೆ ತುಳುನಾಡನ್ನು ಅದೆಷ್ಟೊ ರಾಜವಂಶಗಳು ಅಳುತ್ತಾರೆ. ಆಳುಪರ ನಂತರ ಜೈನ ಸಾಮಂತ ಅರಸರು ತುಳುನಾಡಿನ ಆಚಾರ ಶ್ರೀಮಂತಿಕೆಗೆ ಚ್ಯುತಿಬಾರದರೀತಿಯಲ್ಲಿ ದೈವರಾಧನೆಯನ್ನು ಜೊತೆಯಾಗಿಸಿಕೊಂಡು ಆಳ್ವಿಕೆಯನ್ನು ನಡೆಸುತ್ತಾರೆ. ಅಂತಹ ಅರಮನೆಗಳಲ್ಲಿ ಹೊಸಂಗಡಿ ಅರಮನೆಯೂ ಒಂದು. ಹೊಸಂಗಡಿ ಅರಮಣೆಗೆ ಒಳಪಟ್ಟ ಒಂದು ಮಾಗಣೆಯ 9 ಗ್ರಾಮಗಳಾದ ತೋಡಾರು, ಲಾಡಿ, ಹೊಸಬೆಟ್ಟು, ಕರ್ಪೆ, ಮಾರ್ನಡ್, ಕಲ್ಲಬೆಟ್ಟು, ಕಾರಿಂಜ, ಮಾರೂರು, ಪುಚ್ಚೆಮೊಗರು ಇವುಗಳಲ್ಲಿ ಒಂದಾದ ತೋಡಾರು ಕಾಡು, ಮರ, ಗಿಡ , ನದಿ ತೊರೆ ಗದ್ದೆ , ಬೆಟ್ಟ ಗುಡ್ಡಗಳ್ನೊಳಗೊಂಡು ತೋಡಾರಿನ ಪ್ರಕೃತಿ ಸೊಬಗನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.
ಶ್ರೀ ಕ್ಷೇತ್ರ ತೋಡಾರು
ಪೂರ್ವಾಭಿಮುಖವಾಗಿ ಇರುವ ಈ ದೈವಸ್ಥಾನಕ್ಕೆ ಸುಂದರವಾದ ರಾಜಗೋಪುರವಿದೆ. ರಾಜಗೋಪುರದ ಇಕ್ಕೆಲದಲ್ಲಿಯೂ ವಿಶ್ರಾಂತಿ ಗೋಪುರವಿದೆ. ಸಾಂಪ್ರದಾಯಿಕ ವಾಸ್ತು ಶೈಲಿಯಲ್ಲಿರುವ ಗರ್ಭಗುಡಿಯ ಮುಂಭಾಗದಲ್ಲಿ ಧ್ವಜಸ್ತಂಭವಿದ್ದು ಎದುರಿಗೆ ದೇವಸ್ಥಾನಗಳ ಪದ್ಧತಿಯಂತೆ ದೀಪಸ್ತಂಭವಿದೆ. ದೈವಸ್ಥಾನದ ಸುತ್ತಲೂ ಬಲಿಕಲ್ಲುಗಳು ಇದ್ದು, ಇವೆಲ್ಲಾ ಕೊಡಮಣಿತ್ತಾಯನ " ದೇವೆರ್ಲಾ ಯಾನೆ ದೈವಲಾ ಯಾನೆ" ಎನ್ನುವ ನುಡಿಗೆ ಸಾಕ್ಷಿಯಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಬ್ರಹ್ಮ ಬೈದರ್ಕಳ ಗರೋಡಿ ಮತ್ತು ಗರ್ಭಗುಡಿಯ ಪಕ್ಕದಲ್ಲಿ ಶ್ರೀ ದೈವದ ಮಾಡವಿದೆ. ವಿಶೇಷವಾದ ದೈವಸ್ಥಾನ ಕೊಡಮಣಿತ್ತಾಯನ ಅನುಗ್ರಹ ಕಾರ್ಣಿಕದಿಂದ ಹೆಸರುವಾಸಿಯಾಗಿದೆ.Shri Kodamanithaya Daivasthana, Brahma Baidarkala Garadi.
About the Kshetra
The Hosangadi Palace has traditionally had under its control nine villages in the vicinity including Thodar, Ladi, Hosabettu, Karpe, Marnad, Kallabettu, Karinje, Maarooru and Pucchimogaru. Thodar, being one of them, has till date sustained its age-old natural glory by keeping intact the forests and small hills. Alongside the natural beauty of Tulunadu, Thodar is also a divine destination that has upheld the religious and spiritual values of the land through divine and spirit worship.