ಕ್ಷೇತ್ರ ಪರಿಚಯ
ಮೂಡಣದಿ ಬಾನೆತ್ತರಕೆ ಬೆಳೆದು ನಿಂತ ಹಚ್ಚ ಹಸುರು ಪಶ್ವಿಮಘಟ್ಟಗಳು, ಪಡುವಣದಿ ಭೊರ್ಗರೆದು ನೊರೆಹಾಲ ತೆರದಿ ಉಕ್ಕುತಿರುವ ಕಡಲು. ತುಳುನಾಡಿನ ವರ್ಣಣೆಯೆ ಹೀಗೆ. ಕಣ್ಣಳತೆಗೆ ಸಿಗದ ಕಡಲ ಕಿನಾರೆಯಿಂದ ಪೂರ್ವದ ಪಶ್ಚಿಮ ಘಟ್ಟಗಳವರೆಗೆ, ಬಡಗು ತುಳುನಾಡ ರಾಜಧಾನಿ ಬಾರ್ಕೂರಿನ ಸಮೀಪದ ಚಂದ್ರಗಿರಿ ನದಿಯಿಂದ ತೆಂಕಣದ ಕಾಸರಗೋಡು ನಿಲೇಶ್ವರದ ವರೆಗೆ ತುಳುನಾಡಿನ ವಿಸ್ತಾರ ಎನ್ನುವುದು ಇತಿಹಾಸದ ಪುಟಗಳನ್ನು ನಾವು ತಿರುವಿದಾಗ ನಮಗೆ ತಿಳಿಯುತ್ತದೆ.
ಹೀಗೆ ತುಳುನಾಡನ್ನು ಅದೆಷ್ಟೊ ರಾಜವಂಶಗಳು ಅಳುತ್ತಾರೆ. ಆಳುಪರ ನಂತರ ಜೈನ ಸಾಮಂತ ಅರಸರು ತುಳುನಾಡಿನ ಆಚಾರ ಶ್ರೀಮಂತಿಕೆಗೆ ಚ್ಯುತಿಬಾರದರೀತಿಯಲ್ಲಿ ದೈವರಾಧನೆಯನ್ನು ಜೊತೆಯಾಗಿಸಿಕೊಂಡು ಆಳ್ವಿಕೆಯನ್ನು ನಡೆಸುತ್ತಾರೆ. ಅಂತಹ ಅರಮನೆಗಳಲ್ಲಿ ಹೊಸಂಗಡಿ ಅರಮನೆಯೂ ಒಂದು. ಹೊಸಂಗಡಿ ಅರಮಣೆಗೆ ಒಳಪಟ್ಟ ಒಂದು ಮಾಗಣೆಯ 9 ಗ್ರಾಮಗಳಾದ ತೋಡಾರು, ಲಾಡಿ, ಹೊಸಬೆಟ್ಟು, ಕರ್ಪೆ, ಮಾರ್ನಡ್, ಕಲ್ಲಬೆಟ್ಟು, ಕಾರಿಂಜ, ಮಾರೂರು, ಪುಚ್ಚೆಮೊಗರು ಇವುಗಳಲ್ಲಿ ಒಂದಾದ ತೋಡಾರು ಕಾಡು, ಮರ, ಗಿಡ, ನದಿ ತೊರೆ ಗದ್ದೆ, ಬೆಟ್ಟ ಗುಡ್ಡಗಳ್ನೊಳಗೊಂಡು ತೋಡಾರಿನ ಪ್ರಕೃತಿ ಸೊಬಗನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ನೈಜ ತುಳುನಾಡಿನ ಪ್ರಕೃತಿ ಸೌಂದರ್ಯದ ಜೊತೆಗೆ ಆಚರಣೆ, ದೈವರಾಧನೆ ಮೂಲ ಕಟ್ಟುಪಾಡುಗಳನ್ನು ಎಲ್ಲಿಯೂ ಬಿಟ್ಟು ಕೊಡದೆ ತೋಡಾರು ಹೆಸರಿಗೆ ತಕ್ಕಂತೆ ತುಡರಾಗಿ ಇನ್ನೊಬ್ಬರಿಗೆ ಮಾದರಿಯಾಗಿ ಕಾಣುತ್ತಿದೆ. ಅಭಿವೃದ್ಧಿಯ ಧಾವಂತದಲ್ಲಿ ಊರಿನ ಗುತ್ತು ಮಡಸ್ತಾನಗಳ ಮತ್ತು ಪರಊರಿನ ಬಂಧುಗಳಿಂದ ಕೊಡಮಣಿತ್ತಾಯನು ತನಗೆ ಬೇಕಾದವುಗಳನ್ನು ಮಾಡಿಸಿಕೊಂಡು ಭಕ್ತಿಯಿಂದ ಅರಾಧಿಸಲ್ಪಡುತ್ತಿದ್ದಾನೆ.
ಅವಿಭಜಿತ ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಜೈನಕಾಶಿ ಮತ್ತು ಶಿಕ್ಷಣಕಾಶಿ ಎಂದೇ ಪ್ರಸಿದ್ದವಾದ ಊರು. ಇಲ್ಲಿಂದ ಮಂಗಳೂರಿಗೆ ಹಾದುಹೋಗುವಾಗ ರಾಷ್ಟೀಯ ಹೆದ್ದಾರಿಯಲ್ಲಿ ಸುಮಾರು 4-5 ಕಿ.ಮೀ ಕ್ರಮಿಸಿದಾಗ ಒಂದು ಭವ್ಯವಾದ ದ್ವಾರವನ್ನು ಕಾಣಬಹುದು ಇಲ್ಲಿಂದ 1.5 ಕಿ.ಮೀ ಸಾಗಿದಾಗ ಸುತ್ತ ಹಚ್ಚ ಹಸುರಿಂದ ಕಂಗೊಳಿಸುವ ಪ್ರಕೃತಿಯ ಮಡಿಲಲ್ಲಿ ತಲೆಯೆತ್ತಿ ರಾರಾಜಿಸುತ್ತಿದೆ ಶ್ರೀ ಕ್ಷೇತ್ರ ನಡು ನಡ್ಯೋಡಿ ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿ ತೋಡಾರು.
ಪೂರ್ವಾಭಿಮುಖವಾಗಿ ಇರುವ ಈ ದೈವಸ್ಥಾನಕ್ಕೆ ಸುಂದರವಾದ ರಾಜಗೋಪುರವಿದೆ. ರಾಜಗೋಪುರದ ಇಕ್ಕೆಲದಲ್ಲಿಯೂ ವಿಶ್ರಾಂತಿ ಗೋಪುರವಿದೆ. ಸಾಂಪ್ರದಾಯಿಕ ವಾಸ್ತು ಶೈಲಿಯಲ್ಲಿರುವ ಗರ್ಭಗುಡಿಯ ಮುಂಭಾಗದಲ್ಲಿ ಧ್ವಜಸ್ತಂಭವಿದ್ದು ಎದುರಿಗೆ ದೇವಸ್ಥಾನಗಳ ಪದ್ಧತಿಯಂತೆ ದೀಪಸ್ತಂಭವಿದೆ. ದೈವಸ್ಥಾನದ ಸುತ್ತಲೂ ಬಲಿಕಲ್ಲುಗಳು ಇದ್ದು, ಇವೆಲ್ಲಾ ಕೊಡಮಣಿತ್ತಾಯನ “ದೇವೆರ್ಲಾ ಯಾನೆ ದೈವಲಾ ಯಾನೆ” ಎನ್ನುವ ನುಡಿಗೆ ಸಾಕ್ಷಿಯಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಬ್ರಹ್ಮ ಬೈದರ್ಕಳ ಗರೋಡಿ ಮತ್ತು ಗರ್ಭಗುಡಿಯ ಪಕ್ಕದಲ್ಲಿ ಶ್ರೀ ದೈವದ ಮಾಡವಿದೆ. ವಿಶೇಷವಾದ ದೈವಸ್ಥಾನ ಕೊಡಮಣಿತ್ತಾಯನ ಅನುಗ್ರಹ ಕಾರ್ಣಿಕದಿಂದ ಹೆಸರುವಾಸಿಯಾಗಿದೆ. ಈಗಿರುವ ದಾಖಲೆಗಳ ಪ್ರಕಾರ ಸುಮಾರು ಎಳ್ನೂರು ಎಂಟ್ನೂರು ವರ್ಷಗಳ ಇತಿಹಾಸವಿದ್ದು ದೈವಸ್ಥಾನ 1989 ರಲ್ಲಿ ನವೀಕರಣಗೊಂಡು 2005 ರಲ್ಲಿ ಮತ್ತೆ ಪುನರ್ ನಿರ್ಮಾಣವಾಗಿ ಬ್ರಹ್ಮಕಲಶಾಬಿಷೇಕ ಮುಖಾಂತರ ಸರ್ವತೋಮುಖ ಬೆಳವಣಿಗೆಯನ್ನು ಶ್ರೀ ದೈವಗಳ ಕೃಪೆಯಿಂದ ದಾನಿಗಳ ಸಹಕಾರದಿಂದ ನಡೆದಿದೆ. ವಿಶಾಲವಾದ ನಮಸ್ಕಾರ ಮಂಟಪ, ಸಭಾಮಂಟಪ, ಅನ್ನಛತ್ರ ಎಲ್ಲವನ್ನೊಳಗೊಂಡು ನಿರಂತರವಾಗಿ ಅನ್ನಬ್ರಹ್ಮ ಸ್ವರೂಪಿಯಾದ ಕೊಡಮಣಿತ್ತಾಯನ ಸನ್ನಿದಾನದಲ್ಲಿ ಅನ್ನದಾನವನ್ನು ನಡೆಸಿಕೊಂಡು ಬರಲಾಗುತಿದೆ. ಇಲ್ಲಿ ಗಡಿಪ್ರಧಾನ ಗೊಂಡವರೆ ಮುಕ್ತೇಸರರಾಗಿ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ ಪ್ರಸ್ತುತವಾಗಿ ವಿಶಾಲ್ ಕೀರ್ತಿ ಬಲಿಪರು ಇಲ್ಲಿಯ ಗಡಿಪ್ರಧಾನರು ಮತ್ತು ಮುಕ್ತೇಸರರು.
Shri Kshetra Thodar
The Hosangadi Palace has traditionally had under its control nine villages in the vicinity including Thodar, Ladi, Hosabettu, Karpe, Marnad, Kallabettu, Karinje, Maarooru and Pucchimogaru. Thodar, being one of them, has till date sustained its age-old natural glory by keeping intact the forests and small hills. Alongside the natural beauty of Tulunadu, Thodar is also a divine destination that has upheld the religious and spiritual values of the land through divine and spirit worship.
Kodamanithaya, through its fully functional institutions such as Guttu and devotees has always facilitated the well-being of the village, in turned being vigorously respected by the common people.
Moodubidre, the famed ‘Jaina Kashi’ and ‘Shikshana Kashi’ (educational pilgrimage) stands as a prominent landmark of undivided Udupi and Dakshina Kannada. On the highway from Moodubidre to Mangalore, one encounters a glorious gateway at a distance of 5.5 kilometres. On entering the gateway and proceeding up to nearly 2 kilometres, one approaches the magnificient Nadu Nadyodi Kodamanithaya Daivasthana that divinely lies in the midst of lush and serene greenery. The Daivasthana that faces eastwards has a royally elegant conical tower or gopura, with adjacently lying resting towers. The sanctum sanctorum is constructed in a traditional manner, with a statue of Nandi placed facing the deity as a symbol of divine worship as well. As architectural norms require of temples, here too, the flag pole is placed opposite to the deepasthamba. Towards the right of Kodamanithaya garadi, is the Bramha Baidarkala garadi.
This combination of aspects of divine worship and spirit worship at this Daivasthaana is evidence for the fact that Kodamanithaya is the deity, as well as the guarding spirit of Thodar. His ideals have always been conveyed in a stern manner that allows freedom of life of choice, but never that of pride or arrogance. Owing to this stern ethos of the deity, he has been respectfully worshipped over the years and acknowledged as the ruling power from Neralakatte to Kalsanka. By the wills and powers of Kodamanithaya himself, this destination has grown wildly popular over the years.