ಕ್ಷೇತ್ರದ ಆಚರಣೆಗಳು
ಹಿಂದಿನ ಕಾಲದಲ್ಲಿ ವರ್ಷದ ಹನ್ನೊಂದು ತಿಂಗಳಲ್ಲಿಯೂ (ಆಟಿ ತಿಂಗಳೊಂದು ಬಿಟ್ಟು) ನೇಮೋತ್ಸವು ನಡೆಯುತಿತ್ತು, ಕಾಲಾಂತರದಲ್ಲಿ ಇವೆಲ್ಲ ನಿಂತು ಹೋಯಿತು. ಆಟಿ ತಿಂಗಳಲ್ಲಿ ಮುಚ್ಚುವ ದೈವಸ್ಥಾನದ ಬಾಗಿಲನ್ನು ಸೋಣ ಸಂಕ್ರಾಂತಿಗೆ ತೆರೆದು ಸಂಕ್ರಾಂತಿ ಆಚರಣೆಯನ್ನು ಮಾಡಿ ಆ ತಿಂಗಳ ಪ್ರತಿ ಮಂಗಳವಾರ ದೀಪ ಇಡುವ ಕಟ್ಟಲೆ ನಡೆಯುತ್ತದೆ. ವರ್ಷದ ಎಲ್ಲಾ ಸಂಕ್ರಾಂತಿ ಆಚರಣೆಯನ್ನು ನಡುನಡ್ಯೋಡಿ ಸ್ಥಾನದಲ್ಲಿ ಮತ್ತು ಭಂಡಾರ ಮನೆಯಲ್ಲಿ ದೀಪ ಇಡುವ ಕಟ್ಟಲೆ ನಡೆಯುತ್ತ್ದದೆ .
ವಾರ್ಷಿಕ ಜಾತ್ರೆ “ತೋಡಾರಾಯನ“ ಪೆರಾರ್ದೆ ತಿಂಗಳಿನಲ್ಲಿ (ಧನು ತಿಂಗಳು ಡಿಸೆಂಬರ್ ೧೫ ರಿಂದ ಜನವರಿ ೧೪ ರ ಅವಧಿ) ನಡೆಯುತ್ತದೆ. ವಾರ್ಷಿಕ ಜಾತ್ರೆಯ ಮೊದಲು ಈ ಮಾಗಣೆಯ ದೇವರಾದ ಮಾರೂರು ಹೊಸಂಗಡಿಯ ಶ್ರೀ ಕ್ಷೇತ್ರ ಗೋಪಿನಾಥ ಕೊಡಮಣಿತ್ತಾಯ ದೇವಸ್ಥಾನಕ್ಕೆ ಹಾಗೂ ಪಡ್ಯಾರಬೆಟ್ಟ ಕೊಡಮಣಿತ್ತಾಯಣ ಮೂಲ ಸಾನಿಧ್ಯಕ್ಕೆ ಕಾಣಿಕೆಯನ್ನು ಒಪ್ಪಿಸುವುದು, ಮತ್ತೆ ಹೊಸಂಗಡಿ ಅರಮನೆಗೆ ಹೇಳಿಕೆಯನ್ನು ಕೊಟ್ಟು ಖಂಡಿಗ ಅಸ್ರಣ್ಣರ ಮುಖೇನವಾಗಿ ದಿನ ನಿಗದಿಯಾಗಬೇಕು. ಈ ಆಯನಕ್ಕೆ 15 ದಿನ ಮೊದಲು ಸ್ಥಾನ ಏರುವುದು (ಸಾನ ಮಿತ್ತಾರುನ್) ಎಂದರೆ ಊರಿನ ಹಿರಿಯರು ಸೇರಿ ದಿನ ಮತ್ತು ಜಾತ್ರೆಯ ಪೂರ್ವ ತಯಾರಿಯನ್ನು ನಡೆಸುತ್ತಾರೆ. ಇದಾದ ಮೇಲೆ ಊರಿನಲ್ಲಿ ಯಾವುದೇ ಇತರ ಕಾರ್ಯಕ್ರಮಗಳು ನಡೆಯುವಂತಿಲ್ಲ. ಕಾಲಾವಧಿ ಜಾತ್ರೆಯ ಮುಂಚಿನ ದಿವಸ ಆ ಪುರಾತನ ಗಾಳಿ ಗುಡ್ಡೆಗೆ ಹೋಗಿ ಶೋಧನೆಯ ವೇಳೆ ಸಿಕ್ಕಿದ್ದ ಹಣತೆ (ಈಗ ಬೆಳ್ಳಿಯ ಹೊದಿಕೆಯನ್ನು ಮುಚ್ಚಲಾಗಿದೆ)ಯಲ್ಲಿ ದೀಪ ಹಚ್ಚಿ, ಆದೇ ದಿನ ರಾತ್ರಿ ಬೆಟ್ಟದ ಕೆಳಗೆ ಮೂಹೂರ್ತದ ಕಂಬ ಹಾಕಿ ದೊಂಪದ ಬಲಿ ನೇವೋತ್ಸವ ನಡೆಯುತ್ತದೆ. ಇದಕ್ಕೆ ಚಪ್ಪರ ಸೇವೆ ಎಂದು ಕರೆಯುತ್ತಾರೆ. ಮರುದಿವಸ ಬೆಳಿಗ್ಗೆ ನಡ್ಯೋಡಿ ಸ್ಥಾನದಲ್ಲಿ ಹಿರಿಯರು ಸಾರಿ ಹಾಕುವುದು (ಶಕುನ ನೋಡುವುದು) ಎನ್ನುವ ಕಟ್ಟಲೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ದೈವದ ಮುಕ್ಕಾಲ್ದಿಗಳು, ಗುತ್ತು ಮನೆತನದವರು ಮತ್ತು ಅಸ್ರಣ್ಣರ ಇರುವಿಕೆ ಇರಬೇಕು. ಇದರಲ್ಲಿ ಯಾವುದೇ ತಪ್ಪುಗಳಿದ್ದರೆ ಅದಕ್ಕೆ ದೈವದ ಅಪ್ಪಣೆಯನ್ನು ಪಡೆದುಕೊಂಡು ಕೋರಿಗುಂಟ (ಕೋಳಿ ಗುಂಟ) ಹಾಕುತ್ತಾರೆ.
ನಂತರ ಆ ದಿನ ತೋಡಾರ ಗುತ್ತುವಿನಿಂದ ಭಂಡಾರಹೊರಟು ಭಂಡಾರಕೊಟ್ಯದಿಂದ ಭಂಡಾರವನ್ನು ಜೊತೆಗೆ ಹಿಡಿದುಕೊಂಡು ದೈವಸ್ಥಾನಕ್ಕೆ ತಲುಪಿ ಧ್ವಜಾರೋಹಣ ನಡೆಯುತ್ತದೆ. ಇಲ್ಲಿ ಬಲಿಪರಿಗೆ ವಿಶೇಷವಾದ ಗೌರವ ಸಲ್ಲುತ್ತದೆ. ಇದಕ್ಕೆ ಅರಸರ ಮರ್ಯಾದಿ ಎಂದು ಹೇಳುತ್ತಾರೆ. ಹಿಂದಿನಕಾಲದಲ್ಲಿ ಈ ಎಲ್ಲ ಭೂ ಪ್ರದೇಶವವು ಮರಕಡ ಮನೆತನವು (ಆಳ್ವ) ಆಳುಪರರಿಗೆ ಸೇರಿದ್ದರಿಂದ ಇಲ್ಲಿಯ ನೇಮ ಬಿರ್ದಾವಳಿಗಳನ್ನು ಮರಕಡ ಮನೆತನವರು ನಡೆಸಿಕೊಂಡು ಬರುತ್ತಿದ್ದರು. ಹೀಗೆ ಇಲ್ಲಿ ಮರಕಡದವರಿಗೂ ವಿಶೇಷವಾದ ಸ್ಥಾನಮಾನವಿದೆ. ಇಲ್ಲಿ ಕೊಡಮಣಿತ್ತಾಯನ ಮಾಯನುಡಿಯಂತೆ ದೇವೆರ್ಲಾ ಯಾನೆ ದೈವಲಾ ಯಾನೆ ಎಂಬ ನುಡಿಗೆ ಸಾಕ್ಷಿ ಎಂಬಂತೆ ಇಲ್ಲಿ ದೇವತಾರಾಧನೆಯಂತೆ ತಂತ್ರಾಗಮ, ದೇವರಬಲಿ, ಕಟ್ಟೆಪೂಜೆ, ರಥೋತ್ಸವ, ತೂಟೆದಾರ ಸೇವೆ ನಡೆಯುತ್ತದೆ. ಧ್ವಜಾವರೋಹಣ ಆದ ಬಳಿಕ ಓಕುಳಿ ಗಂಧ ಪ್ರಸಾದ ವಿತರಣೆಯಾಗಿ ಭಂಡಾರ ನಿರ್ಗಮಣವಾಗುತ್ತದೆ. ಅಜಲಿನಂತೆ ಪ್ರತಿಯೊಂದು ಸಮುದಾಯವರಿಗೆ ಹಿಂದಿನಿಂದಲೂ ನಿಮಿತ್ತವಾಗಿದ್ದ ಕರ್ತವ್ಯಗಳನ್ನು ಆ ಮನೆತನದವರೇ ನಡೆಸಿಕೊಂಡು ಬರುತ್ತಿದ್ದಾರೆ.
ಹೀಗೆ ಅಪಾರವಾದ ಭಕ್ತಸಮೂಹಕ್ಕೆ ವರಮೂರ್ತಿಯಾಗಿ ತನ್ನ ಕಲೆ ಕಾರ್ಣಿಕದ ಮುಖೇನವಾಗಿ ತೋಡಾರಿನ ಕೀರ್ತಿಯನ್ನು ಲೋಕವ್ಯಾಪಿಯಾಗಿ ಬೆಳಗಿಸಿ ವಿಷವೈದ್ಯ ಧರ್ಮ ದೈವ ಕೊಡಮಣಿತ್ತಾಯನು ತನ್ನ ಪರಿವಾರ ಶಕ್ತಿಗಳಾದ ಬ್ರಹ್ಮ ಬೈದರ್ಕಳ ಜೊತೆಗೆ 5 ದಿನದ ವಿಜೃಂಭಣೆಯ ಬಿರ್ದಾವಳಿಗಳನ್ನು ಪಡೆದುಕೊಂಡು ಅಜ್ಞಾನಕ್ಕೆ ಸುಜ್ಞಾನದ ಬೆಳಕಾಗಿ ಭಕ್ತರನ್ನು ಪೊರೆಯುತಿದ್ದಾನೆ.
Rituals at the Kshetra
It is said that during the ancient times, Bhootakola would take place all through the year except for the season of ‘aati’. However, that extent of grandeur was lost with time, and contemporarily only performed during the ‘sona’ period of the year. The shrines that are shut down during the former season are opened again during the beginning of ‘sona’ and the deities are acknowledged with a burning lamp every first Tuesday of the season.
Next comes the puddarda kola, which is an equivalent to a harvest festival conducted at the Thodar Guttu. The deity of Shri Kshetra Gopinatha Kodamanithaya of Marur is delivered material acknowledges as a sign of respect at this point. Also, the palace of Hosangadi is approached personally, invited to the upcoming ceremony whose date will be decided by the authorities of the palace itself. They also decided upon the date for the annual ceremony at the same time.
The annual ceremony of the Thodar temple takes place during the Perarde month, which is from 15 December to 14 January. 25 days before the ceremony, senior individuals of the village come together to form a committee that shall overlook the proceedings. Once this committee is formed, there shall be no other auspicious ceremony within the village until this annual event is completed.
On the previous day of the ceremony, a bhootakola ritual takes place at Gaaligudda, where the auspicious beginning of the entire event is marked. This proceeding is known as Chappara Seve.
The next day, in the presence of authorities from the Hosangadi palace, seniors of the village pose questions to the deity that grants them permission to proceed after certain rituals are completed. Then comes the flag hoisting, after which the procession of the deity starts from Thodar Guttu and reaches the daivasthaana. Here, the members of the Balipa family are given due respects, known as arasara maryade or royal respects.
All the land over which these proceedings take place once belonged to the Marakada community. Hence, this community has been ever since performing the rituals of Bhootaradhane and is also considered with great regard in the society. As the deity of Kodamanithaya had declared it true that he is the God as well as the guarding spirit of the area, rituals adhering to both institutions take place at the ceremony. All responsibilities shouldered by respective communities of the village have been accomplished well ever since the inception of the temple. The deity that has ensured all this balance and much more for the population of Thodar is again all set to be adorned with a grand ceremony for himself and the accompanying deities of Bramha Baidarkala. Kodamanithaya is indeed the light that shines across Thodar and beyond, making the village an ideal for all else.