ವಿಶೇಷ ಸಾನಿಧ್ಯಗಳು
ನೇರೊಲ್ದಕಟ್ಟೆ: ಶ್ರೀ ದೈವಕೊಡಮಣಿತ್ತಾಯನು ತನ್ನ ಇರುವಿಕೆಯನ್ನು ಪ್ರಥಮವಾಗಿ ದೇವು ಬಲಿಪರಿಗೆ ತೋರ್ಪಡಿಸಿದ ಜಾಗ, ಬೇಸದ (ಮೇ 15 ರಿಂದ ಜೂನ್ 15 ನಡುವಿನ ತುಳು ತಿಂಗಳಿನ ಅವಧಿ) ಪತ್ತನಾಜೆಯ ಮೊದಲು ಕ್ಷೇತ್ರದ ಕೊನೆಯ ದೊಂಪದ ಬಲಿ ಸೇವೆ ಇಲ್ಲಿ ನಡೆಯುತ್ತದೆ. ಶ್ರೀ ದೈವವನ್ನು ಅರಾಧಿಸಿ ನೇರಳೆಯ ಎಲೆಯಲ್ಲಿಯೇ ಗಂಧ ಪ್ರಸಾಧವನ್ನು ಕೊಡುವುದು ಪೂರ್ವಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಕೈಪುಲ್ಲ ಬಾಕ್ಯಾರು (ಕೈಪುಲ್ಲತ್ತ ಬಾಕಿಮಾರು): ಹಿಂದಿನ ಕಾಲದಲ್ಲಿ ಚೀರಿ ಮುಳ್ಳಿನ ಪೊದೆಯಿಂದ ಕೂಡಿದ್ದ ಗದ್ದೆಯನ್ನು ಕೊಡಮಣಿತ್ತಾಯನು ತನ್ನ ಕಾರ್ಣಿಕದಿಂದ ಸುಡುತ್ತಾನೆ. ಇಲ್ಲಿಂದ ಇದು ಕೊಡಮಣಿತ್ತಾಯನ ಪವಿತ್ರ ಜಾಗವಾಗಿ ಬದಲಾಗುತ್ತದೆ. ಇಲ್ಲಿ ಕೊಡಮಣಿತ್ತಾಯನ ವಿಶೇಷವಾದ ಆಚರಣೆಗಳು ಕಂಬುಲದ ಕೋರಿ, ಧರ್ಮನೇಮಗಳು ನಡೆಯಬೇಕಾದರೆ ಈ ಬಾಕಿಮಾರು ಗದ್ದೆಯಲ್ಲಿಯೇ ನಡೆಯಬೇಕು ಎಂಬುದು ಕೊಡಮಣಿತ್ತಾಯನ ಆರಾಧನೆಯ ನಂಬಿಕೆ. ಪ್ರಸ್ತುತವಾಗಿ ಇಲ್ಲಿ ಯಾವುದೇ ಆಚರಣೆಗಳು ನಡೆಯುವುದಿಲ್ಲ.
ಗಾಳಿಗುಡ್ಡೆ: ಕೊಡಮಣಿತ್ತಾಯನು ತೋಡಾರಿಗೆ ಬಂದ ಸಂದರ್ಭದಲ್ಲಿ ದೀಪವಾಗಿ ಕಂಡಂತಹ ಮೂಲ ಸಾನಿಧ್ಯವಿದು. ಕಾಲ ಕ್ರಮೇಣವಾಗಿ ಜನರು ಇಂತಹ್ದೊಂದು ಸಾನಿಧ್ಯವಿತ್ತು ಎಂಬುದನ್ನು ಮರೆತು ಬಿಡುತ್ತಾರೆ. 1989 ರಲ್ಲಿ ಬ್ರಹ್ಮ ಕಲಶ ನಿಮಿತ್ತವಾಗಿ ಇಟ್ಟಂತಹ ಪ್ರಶ್ನಾ ಚಿಂತನೆಯಲ್ಲಿ ಈ ಪ್ರದೇಶದ ಉಲ್ಲೇಖವಾಗಿ ಅಲ್ಲಿ ಒಂದು ಹಣತೆ ರೂಪದ ವಸ್ತು ಇದೆ ಅದುವೇ ಶ್ರೀ ದೈವದ ಮೂಲ ಸ್ಥಾನ ಎಂದು ತಿಳಿಯಲ್ಪಡುತ್ತದೆ. ಹೀಗೆ ನಡೆದ ಶೋಧನೆಯ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಚಪ್ಪಡಿಕಲ್ಲಿನಿಂದ ನಿರ್ಮಿತವಾದ “ಪೀಠ” ಮತ್ತು “ಹಣತೆ“ ಸಿಗುತ್ತದೆ. ಈ ಸಾನಿಧ್ಯವು ಸುಮಾರು ಸಾವಿರ ಅಡಿ ಎತ್ತರದಲ್ಲಿದ್ದು ನಡುನಡ್ಯೋಡಿ ಸ್ಥಾನದಿಂದ ಸರಿಸುಮಾರು ನಾಲ್ಕು ಕೀ.ಮೀ ದೂರದಲ್ಲಿದೆ. ಈ ಪ್ರದೇಶದಿಂದ ನೇರವಾಗಿ ದೄಷ್ಟಿ ಹಾಯಿಸಿದಾಗ ನಡು ನಡ್ಯೋಡಿ ಸ್ಥಾನದ ಗಾಳಿಗೋಪುರ ಗೋಚರಿಸುವುದು ಇಲ್ಲಿನ ವಿಶೇಷ. ಇಲ್ಲಿಯೇ ಚಪ್ಪರಸೇವೆ ಎನ್ನುವ ಅಚರಣೆ ನಡೆಯಲ್ಪಡುತ್ತಿದ್ದು ಕಾಲಕ್ರಮೇಣ ಇಂತಹ ಎತ್ತರದ ಪ್ರದೇಶಕ್ಕೆ ದೈವದ ಭಂಡಾರವನ್ನು ಕೊಂಡುಹೋಗಿ ಆಚರಣೆ ಮಾಡುವುದು ಕಷ್ಟಸಾಧ್ಯವಾದ ಕಾರಣ ಈ ಬೆಟ್ಟಕ್ಕೆ ಸಮೀಪದ ಸಮತಟ್ಟಾದ ಗುಡ್ಡ ಪ್ರದೇಶದಲ್ಲಿ ಈ ಆಚರಣೆಗಳು ಮುಂದುವರೆದಿವೆ ಈಗಲೂ ಕಾಲಾವಧಿ ಜಾತ್ರೆಯ ಮುಂಚಿನ ದಿವಸ ಆ ಪುರಾತನ ಗಾಳಿ ಗುಡ್ಡೆಗೆ ಹೋಗಿ ಶೋಧನೆಯ ವೇಳೆ ಸಿಕ್ಕಿದ್ದ ಹಣತೆ ( ಈಗ ಬೆಳ್ಳಿಯ ಹೊದಿಕೆಯನ್ನು ಮುಚ್ಚಲಾಗಿದೆ) ಯಲ್ಲಿ ದೀಪ ಹಚ್ಚಿ, ಅದೇ ದಿನ ರಾತ್ರಿ ಬೆಟ್ಟದ ಕೆಳಗೆ ದೊಂಪದ ಬಲಿ ನಡೆಯುತ್ತದೆ. ಇದು ಕ್ಷೇತ್ರದಲ್ಲಿ ನಡೆಯುವ ವರ್ಷದ ಪ್ರಥಮ ನೇಮೋತ್ಸವ.
ಕರ್ತುಲೆ ಬಾವ: ತೋಡಾರಿನಲ್ಲಿ ಯಾವುದೇ ಒಂದು ಗಡಿ ಪ್ರಧಾನವಾಗಬೇಕಾದರೆ ಇಲ್ಲಿಯೇ ನಡೆಯುತ್ತಿತ್ತು. ಇದರಿಂದಾಗಿ ಇದಕ್ಕೆ ಕರ್ತುಲೆ ಭಾವ ಎಂಬುದು ಹೆಸರು ಬಂದಿದೆ ಎನ್ನುವ ಪ್ರತೀತಿ.
ಗಡುಹಾಕಿದ ಸ್ಠಳ: ಇಲ್ಲಿಗೆ ಸಂಬಂಧ ಪಟ್ಟ 3 ಗಡುಹಾಕಿದ ಸ್ಥಳಗಳಿದ್ದು “ಪಡು ಪೇರಳಕಟ್ಟೆ“, “ಕುಕ್ಕುದ ಕಟ್ಟೆ“, “ಎಮ್ಮೆಟ್ಟಿ ಕೆರೆ” (ಗುಂಡೀರ್) ಹೀಗೆ ಈ ಮೂರು ಪ್ರದೇಶದಲ್ಲಿ ಪ್ರತಿ ವರ್ಷಕ್ಕೆ ಒಂದು ಗಡು ಸ್ಥಳದಲ್ಲಿ ದೊಂಪದ ಬಲಿ ಸೇವೆ ನಡೆಯುತ್ತದೆ. ಇದನ್ನು ಆಯಾ ಕರೆಗೆ ಸಂಬಂಧ ಪಟ್ಟವರು ನಡೆಸಿಕೊಡುತ್ತಾರೆ.
ತೋಡಾರಗುತ್ತು: ದೇವು ಬಲಿಪರು ನಿರ್ಮಿಸಿದ ಈ ಮನೆಯಲ್ಲಿ ಕೊಡಮಣಿತ್ತಾಯನು ತನ್ನ ಸಾನಿದ್ದ್ಯವನ್ನು ಪ್ರತಿಷ್ಠಾಪಿಸಿಕೊಂಡಿದ್ದಾನೆ ಕೆಲವೊಂದು ಆಚರಣೆಗಳು ಇಲ್ಲಿಯೂ ನಡೆಯುತ್ತದೆ. ಕೊಡಮಣಿತ್ತಾಯನ ವಿಶೇಷವಾದ ಆಲಂಕಾರಿಕ ವಸ್ತುಗಳು ಇಲ್ಲಿಯೇ ಇದ್ದು ನೇಮೋತ್ಸವದ ಸಂದರ್ಭದಲ್ಲಿ ಭಂಡಾರವು ಇಲ್ಲಿಂದ ಅರಂಭಗೊಂಡು “ಭಂಡಾರದ ಮನೆಯಲ್ಲಿರುವ ಇನ್ನಿತ್ತರ ಕಂಚಿ (ಕಂಚಿ ಕಡೆಮುಟ್ಟು) ಮತ್ತು ಇತರ ಭಂಡಾರವನ್ನು ಜೊತೆಗೆ ತರುತ್ತಾರೆ ಹೀಗೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಡಮಣಿತ್ತಾಯಣ ಸನ್ನಿಧಾನಕ್ಕೆ ಸಂಬಂಧಪಟ್ಟ 7 ಗುತ್ತುಗಳು ಮತ್ತು ಬರ್ಕೆ ಮನೆತನದವರು ಮುಖ್ಯ ಭೂಮಿಕೆಯಲ್ಲಿ ಕಾಣುತ್ತಾರೆ. ಇವುಗಳೆಂದರೆ ತೋಡಾರಗುತ್ತು, ಪಡ್ಯೋಡಿಗುತ್ತು, ಮಾರಿಗುತ್ತು, ಹಾನ್ಯಗುತ್ತು, ಮುಡೋಡಿಗುತ್ತು ,ಬಾರ್ದಿಲಗುತ್ತು (ಬಂಟ ಮನೆತನ), ಬಾರ್ದಿಲಗುತ್ತು (ಜೈನ ಮನೆತನ) ಮತ್ತು ಬಾರ್ದಿಲ ಬರ್ಕೆ ಇಲ್ಲಿ ವಿಶೇಷವಾದ ಸ್ಥಾನಮಾನ ಪಡೆಯುತ್ತಿವೆ.
Special destinations
● Nerolda Katte – This is the spot where the spirit of Kodamanithaya made itself known to Devu Balipa when the historic legend took place. The dompa seve is conducted at this spot during every annual ceremony, and the ritual of distributing prasadam using the leaves of Indian blackberry (nerale) is still prevalent as a symbol of respect to the spot.
● Kaipulla Baakyaru, or Baakimaaru – All rituals associated with Bhootaradhane are held at this spot named Baakimaaru. This place was full of thorny bushes and shrubs before the spirit of Kodamanithaya burnt them down and converted the land into a religiously significant one. Since then, only auspicious occurrings take place here.
● Gaaligudde – This is the place where Kodamanithaya presented himself in the form f light at Thodar. This place, which is naturally the root of all spiritual beliefs associated with this temple, was actually forgotten about until a long time. However, in 1988, the spot was re-disovered through a ritual of questioning the deities; which yielded an answer that there shall be a lamp at the spot if people went excavating. True to the prediction, an earthen lamp was discovered at the same spot and eventually a shrine was established over it, which has since then been the centre of all ritualistic activities associated with Kodamanithaya.
● Karthule bhaava – This is the place where all boundaries of Thodar are defined since ages.
● The three marked spots – There are three custom-oriented markings of spots done namely – Padu Peralakatte, Kukkuda Katte and Gundeer. These are the places where dompada bali ritual takes place alternatively every year, and the respective village heads or families monitor the ritual at their home spot.
● Thodaru Gutuu – This prominent house at Thodar was constructed by Devu Balipa, and has housed the essence of the Kodamanithaya legend within itself since its establishment. Hence, fragments of the bhootaradhane ritual take place here as well. The procession of the gold and silver entourages of the spirit starts from this house during every bhootakola, known as the bhandara. There are also other prominent homes associated with the Kodamanithya legacy namely – Padyodi Guttu, Maari Guttu, Haanya Guttu, Mudodi Guttu, Bardila Guttu and Bardila Barke.